
KG Graduation Day
- Date March 25, 2026
ದಿನಾಂಕ 24.03.2026ರಂದು ಕಿನ್ನಿಗೋಳಿ ಮೇರಿವೇಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೆ.ಜಿ. ಪದವಿ ಪ್ರದಾನ ಸಮಾರಂಭವು ಸಂಭ್ರಮ ಹಾಗೂ ಹರ್ಷೋದ್ಗಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಪುಟ್ಟ ವಿದ್ಯಾರ್ಥಿಗಳ ಕಿಂಡರ್ ಗಾರ್ಡನ್ ಪಯಣದ ಯಶಸ್ವಿ ಪೂರ್ಣತೆಗೆ ಸಂಕೇತವಾದ ಈ ಕ್ಷಣವು ಪಾಲಕರು ಹಾಗೂ ಶಿಕ್ಷಕರಿಗೆ ಹೆಮ್ಮೆಯ ಸಂದರ್ಭವಾಯಿತು. ವಿದ್ಯಾರ್ಥಿಗಳ ಬೆಳವಣಿಗೆ, ಸಾಧನೆಗಳು ಹಾಗೂ ಪ್ರಾಥಮಿಕ ಶಿಕ್ಷಣದತ್ತ ಅವರ ದೃಢ ಹೆಜ್ಜೆಯನ್ನು ಸಂಭ್ರಮಿಸಲು ಈ ಸಮಾರಂಭವನ್ನು ವೈಭವದಿಂದ ಆಯೋಜಿಸಲಾಗಿತ್ತು.
ಶಾಲಾ ಮುಖ್ಯ ಶಿಕ್ಷಕರಾದ ವಂದನೀಯ ಭಗಿನಿ ಶಾಂತಿ ಫ್ಲಾವಿಯ ಮಿನೇಜಸ್ ಅವರು ಆತ್ಮೀಯವಾಗಿ ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಇಕೋ ಟೂರಿಸಂ ಚೇರ್ಮನ್ ಶ್ರೀಮತಿ ಶಾಲೆಟ್ ಪಿಂಟೋ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕೌನ್ಸಿಲರ್ ಶ್ರೀ ಪ್ರಕಾಶ್ ಆಚಾರ್ಯ ಅವರು ಭಾಗವಹಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡು ಪುಟ್ಟ ಮಕ್ಕಳಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು. ಬೆಥನಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಂಯೋಜಕರಾದ ವಂದನೀಯ ಭಗಿನಿ ಮಾರಿಯೋಲ ಬಿ.ಎಸ್ ಅವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮಕ್ಕಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಮಕ್ಕಳ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಎಲ್ಲರ ಮನಸೆಳೆದವು. ಶಾಲೆಯ ಸಹ ಮುಖ್ಯ ಶಿಕ್ಷಕರಾದ ವಂದನೀಯ ಭಗಿನಿ ಸೆಲಿನ್ ಪೇತ್ರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಮಾರಂಭಕ್ಕೆ ಮೆರಗು ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ರೀನಾ ಅವರು ಸೊಗಸಾಗಿ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕಿ ಶ್ರೀಮತಿ ಮಾಲತಿ ಅವರು ವಂದನಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ನೂತನವಾಗಿ ರೂಪುಗೊಂಡ ‘ಕ್ರೀಡೋ ಲ್ಯಾಬ್’ ಅನ್ನು ವಂದನೀಯ ಭಗಿನಿ ಮಾರಿಯೋಲ ಬಿ.ಎಸ್ ಅವರ ದಿವ್ಯ ಹಸ್ತದಿಂದ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಚಿಂತನಾ ಶಕ್ತಿಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿತವಾದ ಈ ಲ್ಯಾಬ್ ಕುರಿತು ಶ್ರೀಯುತ ನಿಖಿಲ್ ಅವರು ಪ್ರಾಸ್ತಾವಿಕವಾಗಿ ವಿವರಿಸಿ, ಅದರ ಮಹತ್ವ ಹಾಗೂ ಉಪಯೋಗಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸಿದರು.
ಈ ಸಮಾರಂಭವು ಸಂತೋಷ, ಹೆಮ್ಮೆ ಹಾಗೂ ಸ್ಮರಣೀಯ ಕ್ಷಣಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಯಿತು.
You may also like
Mangalore Diocesan Examination
Republic day celebration
